ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1989 – ಕರ್ನಾಟಕದ ಒಂಬತ್ತನೆ ವಿಧಾನಸಭೆಗೆ ಚುನಾವಣೆಗಳು 1989ರಲ್ಲಿ ನಡೆದು ಕಾಂಗ್ರೆಸ್ ಪಕ್ಷವು ಅಧಿಕಾರ ಪಡೆಯಿತು. ಹಿಂದಿನ 1983ರ ವಿಧಾನಸಭೆಯಲ್ಲಿನ ಸ್ಥಾನಗಳಿಗಿಂತ ಕಾಂಗ್ರೆಸ್ 113 ಹೆಚ್ಚಿನ ಸ್ಥಾನಗಳನ್ನು ಪಡೆಯಿತು ಮತ್ತು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಒಂಬತ್ತನೆಯ ವಿಧಾನಸಭೆಯು 18 ಡಿಸೆಂಬರ್ 1989ರಿಂದ 20 ಸೆಪ್ಟಂಬರ್ 1994ರ ವರೆಗೆ ಆಸ್ತಿತ್ವದಲ್ಲಿತ್ತು ಮತ್ತು ಕೊನೆಗೆ ವಿಸರ್ಜಿಸಲ್ಪಟ್ಟಿತು. ಈ ಅವಧಿಯಲ್ಲಿ ವೀರೇಂದ್ರ ಪಾಟೀಲ್ ಅಲ್ಲದೆ ಕಾಂಗ್ರೆಸ್‌ನ ಎಸ್. ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಸಹ ಮುಖ್ಯಮಂತ್ರಿಯಾದರು. ಒಬ್ಬತ್ತನೆಯ ವಿಧಾನಸಭೆಯ ಅವಧಿಯಲ್ಲಿ ಕಾಂಗ್ರೆಸ್‌ನ ಎಸ್. ಎಂ. ಕೃಷ್ಣ ಮತ್ತು ವಿ. ಎಸ್. ಕೌಜಲಗಿ ಅವರು ವಿಧಾನಸಭೆಯ ಸ್ಪೀಕರ್ ಆಗಿದ್ದರು. == ಆಧಾರಗಳು == , 1989 2016-12-01 , 1989 2016-12-01 , 1984 2016-12-01 2016-12-01